SHIVANNA - APPU: ಪುನೀತ್‌ ರಾಜುಕುಮಾರ್‌ ರವರ ಜನ್ಮದಿನದ ಸಂಭ್ರಮ ಮನೆಯರಿಗೆ ಅಷ್ಟೇ ಅಲ್ಲದೇ ಇಡೀ ಕರುನಾಡಿಗೆ ಸಂಭ್ರಮದಂತಿದೆ.ಈ ನಡುವೆ ಶಿವಣ್ಣ ಅಪ್ಪುವಿಗೆ ಭಾವನಾತ್ಮಕ ಪತ್ರ ಬರೆದು ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. ಅಪ್ಪುವನ್ನು ಕಳೆದುಕೊಂಡು ಎರಡು ವರ್ಷ ಹತ್ತಿರವಾದರೂ ಅವರನ್ನು ನೆನೆಯದ ದಿನಗಳಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಾಗಿ ಅವರ ಮೇಲಿನ ಪ್ರೀತಿ ಅಭಿಮಾನ ವ್ಯಕ್ತ ಪಡಿಸುತ್ತಿರುವುವುದನ್ನು ಕಾಣಬಹುದು.  ಅದರಲ್ಲೂ ಶಿವರಾಜ್‌ ಕುಮಾರ್‌ ಹಾಗೂ ಅಪ್ಪು ಸಹೋದರರಾಗಿದ್ದರೂ,  ಆತ್ಮೀಯ ಗೆಳೆಯರಂತೆ ಇದ್ದಿದ್ದು ಗೊತ್ತೆ ಇದೆ. 


COMMERCIAL BREAK
SCROLL TO CONTINUE READING

ನಿನ್ನ ನೆನಪುಗಳು ಎಂದಿಗೂ ಅಮರ ಎಂದು ಬರೆದುಕೊಂಡಿರುವ ಶಿವಣ್ಣ, ಸ್ಯಾಂಡಲ್‌ವುಡ್‌ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರಿಲ್ಲದೇ ಇದೀಗ ಎರಡನೇ ವರ್ಷದ ಬರ್ತ್‌ಡೇ ಆಚರಣೆಯಲ್ಲಿದೆ ಅಭಿಮಾನಿ ಬಳಗ. ಕೋಟ್ಯಂತರ ಅಭಿಮಾನಿಗಳ ಎದೆಯಲ್ಲಿ ಶಾಶ್ವತವಾಗಿ ನೆಲೆಸಿರುವ ಅಪ್ಪು, ನಮ್ಮ ನಡುವೆ ದೈಹಿಕವಾಗಿ ಇದ್ದಿದ್ದರೆ ಅವರಿಗೆ ಇಂದಿಗೆ 48 ವರ್ಷ ತುಂಬುತ್ತಿತ್ತು. ಆದರೆ, ಅವರ ಅಕಾಲಿಕ ಸಾವು ಇನ್ನೂ ಮಾಸದ ಶಾಶ್ವತ ನೋವಾಗಿದೆ. ಅವರ ಅನುಪಸ್ಥಿತಿಯಲ್ಲಿಯೇ ಅವರನ್ನು ಸೆಲೆಬ್ರೆಟ್‌ ಮಾಡುತ್ತಿದ್ದಾರೆ.


ಇದನ್ನೂ ಓದಿ: Puneeth Rajkumar: ಅಪ್ಪು ಆರಾಧ್ಯ ದೈವ ಆಗಿದ್ದು ಹೇಗೆ?


ಅಪ್ಪುವಿಗೆ ಭಾವನಾತ್ಮಕ ಪತ್ರ ಬರೆದ ಶಿವಣ್ಣ, ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು. ನಿನ್ನ ಕಣ್ಣಲ್ಲಿದ್ದ ಹೊಳಪು, ನೀನು ಪವರ್‌ ಸ್ಟಾರ್‌ ಆಗೋದನ್ನು ಆವಾಗ್ಲೇ ಹೇಳ್ತಾ ಇತ್ತು. ನೀನು ನಕ್ಕರೆ ಎಲ್ಲರೂ ನಗ್ತಾಯಿದ್ರು, ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ತಾಯಿದ್ರು. ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು, ಹೆಮ್ಮರವಾಗಿ, ಕೋಟ್ಯಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ.


Puneeth Rajkumar Birthday : ʼರಾಜರತ್ನʼನಿಲ್ಲ ಎನ್ನುವ ಮಾತೇ ಇಲ್ಲ..! ಕನ್ನಡಿಗರ ಹೃದಯಾಳದಲ್ಲಿ ʼಅಪ್ಪು ಸದಾ ಅಮರʼ


ನಿನ್ನನ್ನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವುದೇ ಆಗಿದ್ರೂ, ನಿನ್ನ ಹೆಸರಲ್ಲಿ ಪಟಾಕಿ ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಾ ಇದ್ದೀನಿ- ನೀನು ಹುಟ್ಟಿದ್ದು ಒಂದು ಉತ್ಸವ, ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕತೆ. ನಿನ್ನ ನೆನಪುಗಳು ಎಂದಿಗೂ ಅಮರ.. ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು ಎಂದು ತಮ್ಮ ಭಾವನೆಗಳನ್ನು ಪದಗಳ ಮೂಲಕ ಶುಭಾಶಯ ಕೋರಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.